ಈ ಪ್ರಪಂಚದಲ್ಲಿ ಎಲ್ಲ ವಿಷಯೋಪ ಭೋಗಗಳು ಮಾಯೆ ಎನ್ನುವುದಾದರೆ, ಅವುಗಳಲ್ಲಿ ಮೊದಲ ಸ್ಥಾನ ಹೆಣ್ಣಿಗೇ. ಆಕೆಯ ಸೌಂದರ್ಯ ಸೆಳೆತ, ಶೃಂಗಾರಮಯ ಲಾವಣ್ಯಗಳು ಎಂಥ ಪುರುಷನನ್ನೂ ವಿಚಲಿತಗೊಳಿಸದಿರಲಾರವು. ಆದರೆ, ಮಾಯೆಯನ್ನು ಗೆಲ್ಲದೇನೆ ಸಾಮಾನ್ಯನೊಬ್ಬ ಮಹಾಪುರುಷನಾಗಲಾರ. ಹಾಗೆ ಗೆಲ್ಲುವುದಕ್ಕೆ ಅವನ ಅಸ್ರ್ರಯಾವುದಿರಬಹುದು? ಅದು ಅಸ್ಖಲಿತ ಮನೋಭಾವದ ವಾತ್ಸಲ್ಯವೊಂದೇ. ಅಂದರೆ, ಹೆಂಡತಿಯಲ್ಲಿ ಪ್ರೀತಿಯ ಸ್ಪರ್ಶಕ್ಕಿಂತಲೂ ತಾಯಿಯ ಪ್ರೇಮಸ್ಪರ್ಶದಲ್ಲಿರುವ ಅದಮ್ಯ ಅನುಬಂಧವೇ ಅದಾಗಿದೆ.
Thursday, June 26, 2014
Friday, June 20, 2014
ಪ್ರಕೃತಿ-ಸೌಂದರ್ಯ
ಪ್ರಕೃತಿ-ಸೌಂದರ್ಯ ವನ್ನೇ ದ್ವೇಷಿಸುವವ ಸಂನ್ಯಾಸಿಯಾದರೂ ತನ್ನೊಳಗೆ ಶಾಂತ, ಸ್ವಸ್ಥ ಹಾಗೂ ಸುಂದರ ಚಿತ್ತಲಹರಿಯನ್ನು ಹೊಂದಲಾರ. ಮನುಷ್ಯನಿಗೆ ಸುಂದರವಾದದ್ದನ್ನು ಪ್ರೀತಿಸುವುದು ಸ್ವಭಾವಜನ್ಯವಾಗಿರಬೇಕಲ್ಲ... ಆಗ ಬದುಕೂ ಸುಂದರ ಹೂವಿನಂತೆ ಅರಳಿ ಘಮಘಮಿಸುತ್ತದೆ. ಹಾಗಲ್ಲದೇ, ಸುಂದರ ಹೆಣ್ಣನ್ನು ಬೇಕೆಂತಲೇ ಕಿಚಾಯಿಸುವುದು, ಪೀಡಿಸುವುದು ಸ್ವಾಭಾವಿಕವಲ್ಲ ಸಭ್ಯತೆಯ ಲಕ್ಷಣವಲ್ಲ. ಅದೊಂದು ವಿಚಿತ್ರ ವಿಲಕ್ಷಣ ಮನೋವಿಕಾರವೇ ಆಗುತ್ತದೆ. ಅಷ್ಟೇ ದುಷ್ಪರಿಣಾಮನ್ನುಂಟು ಮಾಡುತ್ತದೆ.
Subscribe to:
Posts (Atom)